ಯಲ್ಲಾಪುರ: ಲೋಕೋಪಯೋಗಿ ಕಚೇರಿಯಲ್ಲಿ ಇಂಜಿನಿಯರ್ಸ್ ದಿನಾಚರಣೆ
ಯಲ್ಲಾಪುರ: ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಸೋಮವಾರ ಇಂಜಿನಿಯರ್ಸ್ ದಿನಾಚರಣೆ ಆಚರಿಸಲಾಯಿತು. ಭಾರತರತ್ನ ಸರ್ ಎಂ.ವಿ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಹಾರಹಾಕಿ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಇಂಜಿನಿಯರ ದಿನವನ್ನು ಆಚರಿಸಿದರು. ಸಹಾಯಕ ಅಭಿಯಂತರಾದ ಸಂಜೀವ ಪಾತ್ರೋಟ, ಜಿಪಂ ಸಹಾಯಕ ಅಭಿಯಂತರಾದ ವಿ ಎಂ ಭಟ್ಟ ಹಾಗೂ ಗುತ್ತಿಗೆದಾರರಾದ ಅಶೋಕ ನಾಯ್ಕ,ಎಸ ವಿ ಭಟ್ಟ,ಮಾರುತಿ ಬಂಡಿವಡ್ಡರ, ವಿನಯ ಹೆಗಡೆ,ಸುಬ್ರಹ್ಮಣ್ಯ ಭಟ್ಟ ಹಾಗೂ ಲೋಕೊಪಯೋಗಿ ಇಲಾಖೆ ಸಿಬ್ಬಂದಿಗಳು ಇದ್ದರು