ಅಳ್ನಾವರ: ಅತಿವೃಷ್ಟಿ ತುರ್ತು ಕಾರ್ಯಗಳಿಗೆ ಪ್ರತಿ ತಾಲೂಕಿಗೆ 50 ಲಕ್ಷ ಬಿಡುಗಡೆ: ಅಳ್ನಾವರ ಪಟ್ಟಣದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು
ಅತಿವೃಷ್ಟಿ ತುರ್ತು ಕಾರ್ಯಗಳಿಗೆ ಬಳಕೆ ಮಾಡಲು ಪ್ರತಿ ತಾಲೂಕುಗಳಿಗೆ 50 ಲಕ್ಷ ರೂಪಾಯಿ ನೀಡಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು. ಗುರುವಾರ ಅಳ್ನಾವರ ಪಟ್ಟಣದ ಪಂಚಾಯತ್ ಆವರಣದಲ್ಲಿ ಸಾರ್ವಜನಿಕರ ಅಹವಾಲು ಹಾಗೂ ದೂರುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಮಳೆಯಿಂದ ಹಾನಿಗೊಳಗಾದ ಸೇತುವೆ, ರಸ್ತೆಗಳ ದುರಸ್ಥಿಗೆ ಆಯಾ ಇಲಾಖೆಗೆ ಸೂಚಿಸಲಾಗಿದೆ ಎಂದರು.