ಯಲ್ಲಾಪುರ: ಡೋಮಗೇರಿ ಬಳಿ ಸಭಾಪತಿ ಹೊರಟ್ಟಿ ಕಾರಿನ ಟೈಯರ್ ಬ್ಲಾಸ್ಟ್,ಅಪಾಯದಿಂದ ಪಾರು
ಯಲ್ಲಾಪುರ :ರಾಜ್ಯದ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಯಲ್ಲಾಪುರದ ಮೂಲಕ ಹುಬ್ಬಳ್ಳಿಗೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ತಾಲೂಕಿನ ಡೊಮಗೆರೆ ಕ್ರಾಸ್ ಬಳಿ ರಸ್ತೆಯ ಭಾರೀ ಹೊಂಡದಲ್ಲಿ ಟೈರ್ ಸಿಲುಕಿ ಒಡೆದ (ಬ್ಲಾಸ್ಟ್) ಪರಿಣಾಮ ಅವರ ಕೈಗಳಿಗೆ ಪೆಟ್ಟಾಗಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.