ಶ್ರೀನಿವಾಸಪುರ: ಕುರಿ ಶೆಡ್ ಗೆ ಬೆಂಕಿ 40 ಕುರಿಗಳು ಸಜೀವ ದಹನ : ವರ್ತನ ಹಳ್ಳಿಯಲ್ಲಿ ಘಟನೆ
ಕುರಿ ಶೆಡ್ ಗೆ ಬೆಂಕಿ 40 ಕುರಿಗಳು ಸಜೀವ ದಹನ : ವರ್ತನ ಹಳ್ಳಿಯಲ್ಲಿ ಘಟನೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಆಕಸ್ಮಿಕವಾಗಿ ಕುರಿ ಶೆಡ್ಗೆ ಬೆಂಕಿ ಬಿದ್ದ ಪರಿಣಾಮ ಸುಮಾರು 40 ಕುರಿಗಳು ಸಜೀವ ದಹನವಾಗಿವೆ. ಇದರಿಂದ ರೈತನಿಗೆ ಅಪಾರ ನಷ್ಟ ಉಂಟಾಗಿದೆ.ಈ ದುರದೃಷ್ಟಕರ ಘಟನೆಯು ಗುರುವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಸಂಭವಿಸಿದೆ. ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿಯ ವರ್ತನಹಳ್ಳಿ ಗ್ರಾಮದ ತಿಮ್ಮಯ್ಯ ಎಂಬ ರೈತರಿಗೆ ಸೇರಿದ ಕುರಿ ಶೆಡ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಶೆಡ್ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.