ಹುಬ್ಬಳ್ಳಿ: ಇಲ್ಲಿಯ ಬಂಕಾಪುರ ಚಾಳದ ತಬೀಬ್ಲ್ಯಾಂಡ್ ಹತ್ತಿರ ಮನೆಯೊಂದರ ಬೀಗ ಮುರಿದ ಕಳ್ಳರು ಮನೆಯಲ್ಲಿದ್ದ 4.33 ಲಕ್ಷ ರೂ. ಮೌಲ್ಯದ ಆಭರಣ ಕಳವು ಮಾಡಿದ್ದಾರೆ. ಮಹ್ಮದ ರಫೀಕ್ ಕಲಬುರಗಿ ಎಂಬುವವರು ಮನೆಯ ಬೀಗ ಹಾಕಿ ಕುಟುಂಬ ಸಮೇತ ಕಲಬುರ್ಗಿಗೆ ತೆರಳಿದ್ದರು. ಈ ವೇಳೆ ಕಳ್ಳರು ಬಾಗಿಲ ಮುರಿದು ಒಳ ಪ್ರವೇಶಿಸಿದ್ದಾರೆ. ಮನೆಯಲ್ಲಿದ್ದ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.