ಹಾವೇರಿ: ಹಾವೇರಿ ಹುಕ್ಕೇರಿಮಠದಲ್ಲಿ ಶ್ರೀಗಳಿಗೆ ಶುಭಾಶಯ ಕೋರಿದ ಭಕ್ತರು
Haveri, Haveri | Oct 2, 2025 ಹಾವೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ವಿಜಯದಶಮಿ ಹಬ್ಬ ಆಚರಿಸಲಾಯಿತು. ಹಾವೇರಿ ನಗರದಲ್ಲಿ ಸಂಜೆಯಾಗುತ್ತಿದ್ದಂತೆ ಭಕ್ತರು ಪುರಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಿ ಬನ್ನಿ ಮುಡಿದರು. ನಂತರ ಬಂದುಗಳಿಗೆ ಸ್ನೇಹಿತರಿಗೆ ಬನ್ನಿ ವಿನಿಮಯ ಮಾಡಿಕೊಂಡರು. ಬನ್ನಿ ತಗೆದುಕೊಂಡು ಬಂಗಾರಂಗೆ ಇರೋಣಾ ಎಂದು ಶುಭಾಶಯ ಕೋರಿದರು. ಹುಕ್ಕೇರಿಮಠದಲ್ಲಿ ಭಕ್ತರು ಮಠದ ಶ್ರೀಗಳಿಗೆ ಬನ್ನಿ ನೀಡಿ ಶುಭಾಶಯ ಕೋರಿದರು.