ಕಲಬುರಗಿ: ನಗರದಲ್ಲಿ ಭೂಮಾಫಿಯಾ ವಿರುದ್ಧ ಮಾದರಸನಹಳ್ಳಿ ನಿವಾಸಿಗಳ ಬೃಹತ್ ಹೋರಾಟ
ಕಲಬುರಗಿಯ ಮಾದರಸನಹಳ್ಳಿ ನಿವಾಸಿಗಳು ಭೂಮಾಫಿಯಾ ದಂಧೆಕೋರರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವ ಭೂಮಾಫಿಯಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಕೆಲ ಪೊಲೀಸ್ ಅಧಿಕಾರಿಗಳು ಮಾಫಿಯಾ ಬೆಂಬಲಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಬಡ ಕೂಲಿ ಕಾರ್ಮಿಕರ ಭೂಮಿ ಕಬಳಿಕೆ ವಿಚಾರ ನ್ಯಾಯಾಲಯದಲ್ಲಿದ್ದು, ನವೆಂಬರ್ 13ರಂದು ಮುಂದಿನ ವಿಚಾರಣೆ ನಿಗದಿಯಾಗಿದೆ. ನಿವಾಸಿಗಳು ತಮ್ಮ ಹಕ್ಕಿನ ಹೋರಾಟವನ್ನು ಮುಂದುವರೆಸುವುದಾಗಿ ಘೋಷಿಸಿದರು.