ಬೆಂಗಳೂರು ದಕ್ಷಿಣ: ಕೆಸಿಡಿಸಿ ಘಟಕದಲ್ಲಿರುವ ಅನುಪಯುಕ್ತ ತ್ಯಾಜ್ಯ ಕೂಡಲೆ ವಿಲೇವಾರಿ ಮಾಡಿ - ಮಹೇಶ್ವರ್ ರಾವ್
ಕೆಸಿಡಿಸಿ ಘಟಕದಲ್ಲಿರುವ ಅನುಪಯುಕ್ತ ತ್ಯಾಜ್ಯವನ್ನ ಕೂಡಲೆ ವಿಲೇವಾರಿ ಮಾಡಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೆಪ್ಟೆಂಬರ್ 17ರಂದು ಸಂಜೆ 3 ಗಂಟೆಗೆ ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆಯ ಕಛೇರಿಗಳ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ, ಕೆಸಿಡಿಸಿ ಘಟಕ ಸೇರಿದಂತೆ ಇನ್ನಿತರೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿನ ಕೆಸಿಡಿಸಿಯಲ್ಲಿ 200 ಮೆಟ್ರಿಕ್ ಟನ್ ತ್ಯಾಜ್ಯವನ್ನ ಕೂಡಲೆ ವಿಲೇವಾರಿ ಮಾಡುವಂತೆ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.