ಸಿರವಾರ: ಸಿರವಾರ ಪಟ್ಟಣದಲ್ಲಿ ಕುಡಿಯುವ ನೀರು ಬಿಡುವಂತೆ ವಾರ್ಡ್ ನಿವಾಸಿಗಳಿಂದ ಪ್ರತಿಭಟನೆ
Sirwar, Raichur | Mar 27, 2024 ಸಿರವಾರ : ಕಳೆದ 15 ದಿನಗಳಿಂದ ವಾರ್ಡಿಗೆ ಕುಡಿಯಲು ನೀರು ಸರಬರಾಜು ಆಗುತ್ತಿಲು, ಟ್ಯಾಂಕರ್ ಮೂಲಕವಾದರೂ ನೀರು ಕೊಡಿ ಎಂದು ವಾರ್ಡಿನ ಮಹಿಳೆಯರು, ಪುರುಷರು ನೂರಾರು ಸಂಖ್ಯೆಯಲ್ಲಿ ತಹಸೀಲ್ದಾರ ಕಛೇರಿ, ಪ.ಪಂಚಾಯತಿಗೆ ಮುತ್ತಿಗೆ ಹಾಕುಮ ಮೂಲಕ ಒತ್ತಾಯಿಸಿದರು. ಪಟ್ಟಣದ ಬಹುತೇಕ ಎಲ್ಲಾ ವಾರ್ಡಗಳಿಗೆ ಕೊಳವೆಭಾವಿ ಮೂಲಕ ನೀರು ಸರಬರಾಜು ಆಗುತ್ತಿದೆ, ವಾರ್ಡ ನಂ17, 16,15 ವಾರ್ಡಿಗೆ ಕಳೆದ 15 ದಿನಗಳಿಂದ ಒಂದು ಕೊಡ ನೀರು ಸಹ ಸರಬರಾಜು ಮಾಡುವಲ್ಲಿ ಅದಿಕಾರಿಗಳು, ಸಿಬ್ಬಂದಿ ವರ್ಗದ ವಿಫಲರಾಗಿದ್ದಾರೆ, ಸಂಬಂಧಪಟ್ಟ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಬುಧವಾರ ಪ್ರತಿಭಟನೆ ಮಾಡಲಾಯಿತು