ಹಿರಿಯೂರು: ನಗರದಲ್ಲಿಂದು ನಗರಸಭೆಗೆ ಪ್ರಭಾರ ಅಧ್ಯಕ್ಷರಾಗಿ ಹೆಚ್ ಮಂಜುಳ ಅಧಿಕಾರ ಸ್ವೀಕಾರ
ಹಿರಿಯೂರು ನಗರಸಭೆಗೆ ಪ್ರಭಾರ ಅಧ್ಯಕ್ಷರಾಗಿ ಶನಿವಾರ ಮಧ್ಯಾಹ್ನ 1 ಗಂಟೆಗೆ ಹೆಚ್ ಮಂಜುಳ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಜೆ ಆರ್ ಅಜಯ್‌ಕುಮಾರ್ ಅಧ್ಯಕ್ಷರು ನಗರಸಭೆ ಹಿರಿಯೂರು ಇವರು ಹಿರಿಯೂರು ನಗರಸಭೆ ಅಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಅಂಗೀಕರಿಸಿ. ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ನಿಯಮ 42ರ ಪ್ರಕಾರ ಉಪಾಧ್ಯಕ್ಷರು ಅಧ್ಯಕ್ಷರ ಕರ್ತವ್ಯಗಳನ್ನು ನಿರ್ವಹಿಸಲು ಸೂಚಿಸಿರುವಂತೆ ನಗರಸಭೆ ಉಪಾಧ್ಯಕ್ಷರಾಗಿದ್ದ ಹೆಚ್ ಮಂಜುಳ ಇವರು ಹಿರಿಯೂರು ನಗರಸಭೆಗೆ ನೂತನ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.