ವಿರಾಜಪೇಟೆ: ವಿ.ಬಾಡಗ ಗ್ರಾಮದ ಕ್ರೀಡಾ ತರಬೇತಿ ವಸತಿ ನಿಲಯಕ್ಕೆ ಮೀಸಲಿಟ್ಟ ಜಾಗ ಪರಿಶೀಲಿಸಿದ ಶಾಸಕ ಎ ಎಸ್ ಪೊನ್ನಣ್ಣ
ಕೊಡಗಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉನ್ನತ ಮಟ್ಟದ ಕ್ರೀಡಾ ತರಬೇತಿ ವಸತಿ ನಿಲಯ , ವಿ ಬಾಡಗದಲ್ಲಿ ಮೀಸಲಿಟ್ಟಿರುವ ಸ್ಥಳ ವೀಕ್ಷಣೆಯನ್ನು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಹಾಗೂ ರಾಜ್ಯಸಭಾ ಸದಸ್ಯರಾದ ಅಜಯ್ ಮಾಕನ್ ರವರೊಂದಿಗೆ ಕೈಗೊಂಡರು.ವೀಕ್ಷಣೆ ಹಾಗೂ ಪರಿಶೀಲನೆ ಸಂದರ್ಭದಲ್ಲಿ ಮಾನ್ಯ ಶಾಸಕರು ರಾಜ್ಯಸಭಾ ಸದಸ್ಯರಿಗೆ ಸದರಿ ಸ್ಥಳದಲ್ಲಿ ಉನ್ನತ ಮಟ್ಟದ ತರಬೇತಿ ವಸತಿ ನಿಲಯ ಸ್ಥಾಪಿಸಿದಲ್ಲಿ ರಾಜ್ಯದ ಹಾಗೂ ಅದರಲ್ಲೂ ವಿಶೇಷವಾಗಿ ಕೊಡಗಿನ ಕ್ರೀಡಾಪಟುಗಳಿಗೆ ಆಗುವ ಅನುಕೂಲದ ಬಗ್ಗೆ ಹಾಗೂ ಇಲ್ಲಿ ಕಲ್ಪಿಸಲು ಉದ್ದೇಶಿಸಿರುವ ಕ್ರೀಡಾ ಸವಲತ್ತುಗಳ ಬಗ್ಗೆ ವಿವರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣನವರು, ತಾವು