ಕಲಬುರಗಿ: ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ವಾಗ್ದಾಳಿ: ಇಸ್ಪಿಟ್ ದಂದೆ ತಡೆಯಲು ಸವಾಲು
ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮತ್ತೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ 10 ಗಂಟೆಗೆ ವಿಡಿಯೋ ಹಂಚಿಕೊಂಡ ಅವರು, ಬಿಜೆಪಿ ಹೋರಾಟದಿಂದ ಸರ್ಕಾರ ಬೀಳಲಿದೆ ಎಂಬ ಭಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಗಿದೆ. ಚಿಕ್ಕಂದಿರುತ್ತಾನೆ ಬಂಗಾರದ ಚಮಚದಲ್ಲಿ ತಿಂದು ಬೆಳೆದವರು ನೀವು. ನಾಲ್ಕುಬಾರಿ ಮಿನಿಷ್ಟರ್ ಆಗಿದ್ದೀರಿಅಂದ ಮಾತ್ರಕ್ಕೆ ಇಲ್ಲಸಲ್ಲದ ಮಾತನಾಡುವದು ಸರಿಯಲ್ಲ ಎಂದರು, ಮೋದಿ, ಅಮಿತ್ ಶಾಹಾ ಬಗ್ಗೆ ಮಾತನಾಡುವ ಮುನ್ನ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಇಸ್ಪಿಟ್ ದಂದೆ ತಡೆಯಲಿ ಎಂದು ರಾಠೋಡ ಟೀಕೆ ಮಾಡಿದ್ದಾರೆ...