ಬಳ್ಳಾರಿ: ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿಪೂಜೆ
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಶುಕ್ರವಾರ ನಗರದ ಹಾವಂಭಾವಿ ಪ್ರದೇಶದ ಹಲವು ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ವಾರ್ಡ್ ಸಂಖ್ಯೆ 36ರ ಹಾವಂಭಾವಿಯ ಗೋವಿಂದಯ್ಯರ ಮನೆಯಿಂದ ರಾಮನಗರ 3ನೇ ಅಡ್ಡ ರಸ್ತೆಯವರೆಗೆ ಅಂದಾಜು 71.75 ಲಕ್ಷ ರೂ.ಗಳ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.