ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನ ಬಗೆಹರಿಸುವಂತೆ ರೈತ ಮುಖಂಡ ಸದಾಶಿವ ಆಗೋಜಿ ಕವನದ ಮೂಲಕ ತಾವೇ ಹಾಡು ಹಾಡಿ ಒತ್ತಾಯಿಸಿದ್ದಾರೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಮಾತನಾಡಿರುವ ಅವರು ,ಆಲಮಟ್ಟಿ ಜಲಾಶಯದ ಎತ್ತರವನ್ನ 524 ಮೀಟರಗೆ ಎತ್ತರಿಸಿದಾಗ ಆ ವ್ಯಾಪ್ತಿಯಲ್ಲಿ ಮುಳಗಡೆಯಾಗುವ ಜಮೀನುಗಳಿಗೆ ಯೋಗ್ಯ ಬೆಲೆ ನೀಡಬೇಕೆಂದು ಒತ್ತಾಯಿಸಿದ್ದಾರೆ.ಮುಳುಗಡೆ ಹಿನ್ನೆಲೆ ಕೃಷ್ಣ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಒಳಪಡುವ ರೈತರಿಗೆ ಯಾವುದೇ ಬ್ಯಾಂಕನಿಂದ ಸಾಲಸೋಲ ಸಿಗುತ್ತಿಲ್ಲ,ಸಮಸ್ಯೆ ಬಗೆಹರಿಯುತ್ತಿಲ್ಲ,ಹೀಗಾಗಿ ಶಾಸಕರುಗಳು ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಧ್ವನಿ ಎತ್ತಬೇಕೆಂದು ಮನವಿ ಮಾಡಿ,ಸರ್ಕಾರದ ಹಣ ಪೋಲಾಯಿತು ,ಅನ್ನದಾತನ ಬದುಕು ಹಾಳಾಯಿತು ಎಂಬ ಕವನದ ಮೂಲಕ ಹಾಡನ್ನ ಹಾಡಿದ್ದಾರೆ.