ಆನೇಕಲ್: ಹೆಬ್ಬಗೋಡಿಯಲ್ಲಿ ಜಿಮ್ ಟ್ರೈನರ್ ಮೇಲೆ ಮಾರಣಾಂತಿಕ ಹಲ್ಲೆ
ಸಿನಿಮೀಯ ಮಾದರಿಯಲ್ಲಿ ಜಿಮ್ ಟ್ರೈನರ್ ಮೇಲೆ ಹಲ್ಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಸೆಪ್ಟೆಂಬರ್ 23ರಂದು ಸಂಜೆ 5:45ರ ಸುಮಾರಿಗೆ ಹೆಬ್ಬಗೋಡಿಯ ಅನಂತ ನಗರದಲ್ಲಿ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.ಆನೇಕಲ್ ನಿವಾಸಿಯಾಗಿರುವ ಜಿಮ್ ಟ್ರೈನರ್ ಸಂದೀಪ್ ಮೇಲೆ ಅರುಣ್, ಗೌತಮ್, ಅನುಷಾ, ಮೇಘನಾ ಸೇರಿದಂತೆ ಇತರರಿಂದ ಹಲ್ಲೆ ನಡೆದಿದೆ.ಜಿಮ್ ಟ್ರೈನರ್ ಸಂದೀಪ್ ತಮ್ಮ ಕ್ಲೈಂಟ್ ಆಗಿದ್ದ ಅನುಷಾ ಜೊತೆ ವಾಟ್ಸಾಪ್ ಮೂಲಕ ಚಾಟಿಂಗ್ ಮಾಡುತ್ತಿದ್ದರು.ಅನುಷಾ ಮೊಬೈಲ್ ಚೆಕ್ ಮಾಡಿದ್ದ ಸಹೋದರರಾದ ಗೌತಮ್ ಹಾಗೂ ಅರುಣ್ ಮೊಬೈಲ್ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿ ರಾಡ್ ಮತ್ತು ಕೈಗಳಿಂದ ಮಾರಣಾಂತಿಕ ಹಲ್ಲೆಗೈದಿದ್ದಾರೆ.