ಜ್ಞಾನ ಭಾರತಿ ಪೊಲೀಸರಿಂದ ನಕಲಿ ಸ್ವಾಮೀಜಿ ಅರೆಸ್ಟ್ ಮಾಡಲಾಗಿದ್ದು, ವಿಜಯ್ ಚಿತ್ತೋಡಿಯಾ ಗುರೂಜಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯ್ ಸಹಚರನಾಗಿದ್ದ ಮನೋಜ್ ಸಿಂಗ್ ಚಿತ್ತೋಡಿಯಾ ನನ್ನ ಸಹ ಬಂಧಿಸಲಾಗಿದೆ. ಮೂಲತಃ ಗುಜರಾತ್ ಮೂಲದ ಆರೋಪಿಗಳಾಗಿದ್ದ ಆರೋಪಿಗಳು, ಬೆಂಗಳೂರು, ತುಮಕೂರು ಸೇರಿ ಒಟ್ಟು ಎಂಟು ಟೆಂಟ್ ಗಳನ್ನು ಹೊಂದಿದ್ದು, ಟೆಂಟ್ನಲ್ಲಿ ಬಹುತೇಕ ಎಲ್ಲಾ ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ಮಾಡ್ತೀನಿ ಎಂದು ಹೇಳಿ ವಂಚಿಸಿದ್ದರು. ಲೈಂಗಿಕ ಸಮಸ್ಯೆ ಎಂದು ಹೋಗಿದ್ದ ವ್ಯಕ್ತಿಯೋರ್ವನಿಗೆ 40 ಲಕ್ಷ ವಂಚಿಸಿದ್ದಾರೆ ಈ ಖತರ್ನಾಕ್ ಆಸಾಮಿಗಳು. ವಂಚನೆ ಬಗ್ಗೆ ತಿಳಿದ ವ್ಯಕ್ತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.