ಚಳ್ಳಕೆರೆ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ನಗರದ ಅಬಕಾರಿ ಇಲಾಖೆ ಮುಂದೆ ಮಹಿಳೆರು ಪ್ರತಿಭಟನೆ
ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಟಕ್ಕೆ ಕಡಿವಾಣ ಹಾಕುವಂತೆ ಮಂಗಳವಾರ ನಗರದ ಅಬಕಾರಿ ಇಲಾಖೆ ಮುಂದೆ ಸಿರದಾರ ಕಪಿಲೆ, ಕುಮಾರಿ ಕಪಿಲೆ, ಹೊನ್ನಯ್ಯ ರೊಪ್ಪದ ಮಹಿಳೆರು ಪ್ರತಿಭಟನೆ ನಡೆಸಿದ್ದಾರೆ.ಈ ಸಮಯದಲ್ಲಿ ಸಿರದಾರಕಪಿಲೆ ಗ್ರಾಮದ ಮಹಿಳೆ ಸುನಿತ ಮಾತನಾಡಿ, ನಾವು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಈ ಗ್ರಾಮದಲ್ಲಿ ಇರುವ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದರಿಂದ ಇಲ್ಲಿನ ಗಂಡಸರು ಕುಡಿತಕ್ಕೆ ಬಿದ್ದು ಹಣದ ಜತೆಗೆ ಆರೋಗ್ಯ ವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ನಂತರ ತಾ.ಕಚೇರಿಯಲ್ಲಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದಾರೆ.