ಕಲಬುರಗಿ : ಕಲಬುರಗಿ ನಗರದಲ್ಲಿ ದಿನೇ ದಿನೇ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಾನೆ ಇವೆ.. ನಗರದ ಡಿ ಮಾರ್ಟ್ ಬಳಿ ನಿಲ್ಲಿಸಲಾಗಿದ್ದ ಬೈಕ್ ಕಳ್ಳತನವಾದ ಘಟನೆ ನಡೆದಿದ್ದು, ಡಿಸೆಂಬರ್ 26 ರಂದು ಬೆಳಗ್ಗೆ 9.30 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಸೈಯದ್ ಹುಸೇನ್ ಎಂಬುವರು ತಮ್ಮ KA 32 EQ 1478 ಸಂಖ್ಯೆಯ ಹೊಂಡಾ ಆ್ಯಕ್ಟಿವ ಬೈಕ್ನ್ನ ನಗರದ ಡಿ-ಮಾರ್ಟ್ ಮುಂದೆ ಪಾರ್ಕ್ ಮಾಡಿ ಅಗತ್ಯ ವಸ್ತುಗಳ ಖರೀದಿಗೆ ಹೋಗಿದ್ದು, ಮರಳಿ ಬರೋದ್ರೊಳಗೆ ಬೈಕ್ ಕಳ್ಳತನ ಮಾಡಲಾಗಿದೆ.. ಇನ್ನೂ ಈ ಬಗ್ಗೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ