ಜೇವರ್ಗಿ: ಚಿಗರತ್ತಳ್ಳಿಯಲ್ಲಿ ಲಕ್ಷ ಲಕ್ಷದ ಬಿಲ್ ಸಮಸ್ಯೆಗೆ ಜೆಸ್ಕಾಂ ಅಧ್ಯಕ್ಷರ ತಕ್ಷಣದ ಪರಿಹಾರ
ಜೇವರ್ಗಿ ತಾಲೂಕಿನ ಚಿಗರತ್ತಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಂದ ಹಿನ್ನೆಲೆಯಲ್ಲಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾರ ಅವರು ತಕ್ಷಣ ಕ್ರಮ ಕೈಗೊಂಡು AEE ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿದರು. ಪರಿಶೀಲನೆ ವೇಳೆ ತಾಂತ್ರಿಕ ದೋಷದಿಂದ ಬಿಲ್ ಹೆಚ್ಚಾಗಿ ಬಂದಿರುವುದು ಪತ್ತೆಯಾಗಿ, ಬಿಲ್ಗಳನ್ನು ಮಿನಿಮಮ್ ಮಟ್ಟಕ್ಕೆ ತಿದ್ದುಪಡಿ ಮಾಡಲಾಯಿತು. ಬಿಲ್ ಕಲೇಕ್ಟರ್ ನಿಧನ ಮತ್ತು ತಾತ್ಕಾಲಿಕ ಸಿಬ್ಬಂದಿಯಿಂದ ನಡೆದ ತಪ್ಪೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶನಿವಾರ 4 ಗಂಟೆಗೆ ಮಾತನಾಡಿದ ಅಧ್ಯಕ್ಷರು ತಿಳಿಸಿದ್ದಾರೆ..