ನಾಗಮಂಗಲ : ಗೂಡ್ಸ್ ವಾಹನ ವೊಂದು ಡಿಕ್ಕಿ ಹೊಡೆದ ಪರಿಣಾಮ ಪುಟ್ಟ ಬಾಲಕಿಯೊಬ್ಬಳು ಸಾವನ್ನ ಪ್ಪಿರುವ ಘಟನೆ ನಾಗ ಮಂಗಲ ಪಟ್ಟಣದಲ್ಲಿ ಜರುಗಿದೆ. ಬಿಹಾರ್ ಮೂಲದ ನೀರಜ್ ಶಾಹನಿ ಎಂಬುವರ ಮಗಳಾದ ಮೂರು ವರ್ಷದ ನಂದಿನಿ ಮೃತಪಟ್ಟ ದುರ್ದೈವಿಯಾಗಿದ್ದು ಈ ಕುಟುಂಬ ಶ್ರೀರಾಮನಹಳ್ಳಿ ಯ ಕೋಳಿ ಫಾರಂ ನಲ್ಲಿ ವಾಸವಿದ್ದರು ಎನ್ನಲಾಗಿದೆ. ಭಾನುವಾರ ಸಾಯಂಕಾಲ 6.45 ರ ಸಮಯದಲ್ಲಿ ತರಕಾರಿ ತೆಗೆದು ಕೊಂಡು ಹೋಗಲೆಂದು ಈ ಕುಟುಂಬ ನಾಗಮಂಗಲಕ್ಕೆ ಬಂದಿದ್ದು ಇಲ್ಲಿನ ಮಂಡ್ಯ ಸರ್ಕಲ್ ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಗೂಡ್ಸ್ ಟೆಂಪೋ ನಂದಿನಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.