ಹುನಗುಂದ: ಕಮತಗಿ ಪಟ್ಟಣದಲ್ಲಿ ಆರ್ ಎಸ್ ಎಸ್ ಪಥಸಂಚಲನದಲ್ಲಿ ಗಮನ ಸೆಳೆದ ಮಕ್ಕಳು
ಕಮತಗಿ ಪಟ್ಟಣದಲ್ಲಿ ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಅ.12 ರಂದು ನಡೆಯಿತು. ಶಾಖಾಂಬರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಸಂಜೆ 4.15ಕ್ಕೆ ಆರಂಭವಾದ ಈ ಪಥಸಂಚಲನವು ವಿವಿಧ ಮಾರ್ಗಗಳ ಮೂಲಕ ಸಂಚರಿಸಿ, ಕೇಸರಿ ತಳಿರು ತೋರಣ ಮತ್ತು ರಂಗೋಲಿಗಳಿಂದ ಅಲಂಕರಿಸಲ್ಪಟ್ಟ ರಸ್ತೆಯಲ್ಲಿ ಸಾಗಿತು. ಪುಟಾಣಿ ಮಕ್ಕಳ ರಾಷ್ಟ್ರಭಕ್ತರ ವೇಷಭೂಷಣಗಳು ಗಮನ ಸೆಳೆದವು.