ತೀರ್ಥಹಳ್ಳಿ: ಸೊಪ್ಪುಗುಡ್ಡೆಯಲ್ಲಿ ರಸ್ತೆ ಕಾಮಗಾರಿ ವೇಳೆ ಅವಘಡ: ವಿದ್ಯುತ್ ಕಂಬಕ್ಕೆ ರೋಡ್ ರೋಲರ್ ಡಿಕ್ಕಿ
ರಸ್ತೆ ಕಾಮಗಾರಿ ಮಾಡುತ್ತಿರುವ ವೇಳೆ ರೋಡ್ ರೋಲರ್ ಹಿಂಭಾಗ ಏಕಾಏಕಿ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದ ಘಟನೆ ಬುಧವಾರ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆಯಲ್ಲಿ ನಡೆದಿದೆ.ರಸ್ತೆ ಸಂಪೂರ್ಣ ಹೋಂಡಾ ಗುಂಡಿಯಾಗಿರುವ ಕಾರಣ ಇಂದು ರಸ್ತೆ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ರೋಡ್ ರೋಲರ್ ನಿಲ್ಲಿಸಿದ್ದ ವೇಳೆ ಚಾಲಕನಿಲ್ಲದೆ ಏಕಾಏಕಿ ಹಿಂಭಾಗ ಸಲ್ಲಿಸಿ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಆನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಹೈ ಟೆನ್ಮನ್ ವೈಯರ್ ಇರುವ ವಿದ್ಯುತ್ ಕಂಬವಾಗಿದ್ದು ಯಾವುದೇ ಅವಘಡವ ಸಂಭವಿಸಿಲ್ಲ.