ಯಡ್ರಾಮಿ: ಮಗನ ಸಾವಿನಲ್ಲಿ ಸೊಸೆ ವಿರುದ್ಧ ಅನುಮಾನ: ಕಣಮೇಶ್ವರ ಗ್ರಾಮದಲ್ಲಿ 14 ತಿಂಗಳ ಹಿಂದೆ ಹೂತಿಟ್ಟ ಮಗನ ಶವ ಹೊರ ತೆಗೆಸಿದ ತಾಯಿ
ಕಲಬುರಗಿ : ಮಗನ ಸಾವಿನಲ್ಲಿ ಸೊಸೆ ಮೇಲೆ ಅನುಮಾನ ಬಂದ ಹಿನ್ನಲೆಯಲ್ಲಿ ತಾಯಿಯೊಬ್ಬಳು, ಅಂತ್ಯಕ್ರಿಯೆ ನಡೆದು 14 ತಿಂಗಳ ಬಳಿಕ ಶವವನ್ನ ಹೊರೆತೆಗೆಸಿ ಮರಣೋತ್ತರ ಪರೀಕ್ಷೆ ಮಾಡಿಸಿದ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದಲ್ಲಿ ನಡೆದಿದ್ದು, ನ13 ರಂದು ಬೆಳಗ್ಗೆ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಪಂಡಿತ ದೊಡ್ಡಮನಿ(36) 14 ತಿಂಗಳ ಹಿಂದೆ ಮೃತಪಟ್ಟಿದ್ದರು. ಇದೀಗ ಸೊಸೆ ರೂಪಾ ಮೇಲೆ ಅನುಮಾನಗೊಂಡು ತಾಯಿ ಲಕ್ಷ್ಮೀಬಾಯಿ ಚಿಕ್ಕಬಳ್ಳಾಪುರ ಜಿಲ್ಲೆಯ ಠಾಣೆವೊಂದರಲ್ಲಿ ಪ್ರಕರಣ ದಾಖಲಿಸಿದ್ದರು.