ಬಸವಕಲ್ಯಾಣ: ಟಾಟಾ ಏಸ್ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ, ಓರ್ವ ಸಾವು, 14 ಜನರಿಗೆ ಗಾಯ; ಸಸ್ತಾಪೂರ ಬಂಗ್ಲಾದ ಮುಡುಬಿ ಕ್ರಾಸ್ ಬಳಿ ಘಟನೆ
ಬಸವಕಲ್ಯಾಣ: ಹೈವೆ ರಸ್ತೆಯಲ್ಲಿ ಚಲಿಸುತಿದ್ದ ಟಾಟಾ ಮ್ಯಾಜಿಕ್ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟು, 14 ಜನರಿಗೆ ಗಂಭೀರವಾಗಿ ಗಾಯಗಳಾದ ಘಟನೆ ತಾಲೂಕಿನ ಸಸ್ತಾಪೂರ ಬಂಗ್ಲಾ ಬಳಿಯ ಮುಡಬಿ ಕ್ರಾಸ್ ಬಳಿ ಜರುಗಿದೆ. ಮಹಾರಾಷ್ಟ್ರದ ಸೇರಡೋಣ ಗ್ರಾಮದ ನಿವಾಸಿ ವಿಲಾಸ ಪಾಂಚಾಳ (55) ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಗಾಯಾಳು ವ್ಯಕ್ತಿಗಳಿಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಹಾಗೂ ಕಲಬುರ್ಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸುದ್ದಿ ತಿಳಿದ ಸಂಚಾರಿ ಠಾಣೆ ಪಿಎಸ್ಐ ಸಿದ್ದೇಶ್ವರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ