ಶಿರಸಿ: ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಸಂಸದ ಕಾಗೇರಿಯಿಂದ ಮರಾಠಿಕೊಪ್ಪದ ಅಮರ್ ಜವಾನ್ ಸ್ಮಾರಕ ಉದ್ಯಾನವನದಲ್ಲಿ ಪುಷ್ಪ ನಮನ ಸಲ್ಲಿಕೆ
ಶಿರಸಿ : ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಶಿರಸಿಯ ಮರಾಠಿಕೊಪ್ಪ ದ ಅಮರ ಜವಾನ್ ಸ್ಮಾರಕ ಉಧ್ಯಾನವನದಲ್ಲಿ ವೀರ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಕಾರ್ಗಿಲ್ ವಿಜಯವನ್ನು ಸ್ಮರಿಸಿದರು. ಈ ಸಂಧರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೆರ್, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಮಹಾಂತೇಶ್ ಹಾದಿಮನಿ, ನಗರ ಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸ್ಥಾಯಿ ಸಮೀತಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಗೌರವ ನಮನ ಸಲ್ಲಿಸಿದರು.