ಶಿವಮೊಗ್ಗ: ಹೊಸನಗರದ ಗ್ರಾಮದ ಚಿಕಳಿ ಗ್ರಾಮದಲ್ಲಿ ಕಾಲು ಸಂಕದಿಂದ ಜಾರಿ ಬಿದ್ದು ಮಹಿಳೆ ಸಾವು
ಮಲೆನಾಡಿನ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗ್ರಾಮದ ಚಿಕಳಿ ನಿವಾಸಿ ಮಹಿಳೆಯೊಬ್ಬರು ಕಾಲುಸಂಖದಿಂದ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ಜರುಗಿದೆ. ಚಿಕಳಿ ನಿವಾಸಿ 43 ವರ್ಷದ ಶಶಿಕಲಾ ಎಂಬವರು ಗದ್ದೆ ಕೆಲಸಕ್ಕೆ ಹೋಗುವ ಸಮಯದಲ್ಲಿ ಕಾಲು ಸಂಕದಿಂದ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದರು ಅವರ ಮೃತ ದೇಹ ಪತ್ತೆಯಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.