ಶಿವಮೊಗ್ಗ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ನೀಲಿ ನಕ್ಷೆ ತಯಾರಿಸಲಾಗಿದೆ: ನಗರದಲ್ಲಿ ಸಂಸದ ಬಿ.ವೈ.ರಾಘವೇಂದ್ರ
ಶಿವಮೊಗ್ಗದ ಸರ್ವಾಂಗಿನ ಅಭಿವೃದ್ಧಿಗೆ ಜನ ನನಗೆ ಮತ ನೀಡಿದ್ದಾರೆ ಜಿಲ್ಲೆಯ ಅಭಿವೃದ್ಧಿಯ ನೀಲಿನಕ್ಷೆಯನ್ನ ತಯಾರಿಸಿದ್ದೇವೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈಲ್ವೇಸ್, ಹೆದ್ದಾರಿಗಳು ಆಗಿದೆ. ಶಿವಮೊಗ್ಗದ ಕ್ಷೇತ್ರ ಬರುವಂತ ದಿನಗಳಲ್ಲಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತೆ. ವಿಐಎಸ್ಎಲ್. ಎಂಪಿಎಂ, ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುತ್ತೇನೆ. ಭೂಸಾರಿಗೆ ಸಚಿವರವನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇನೆ ಎಂದರು.