ಹುಬ್ಬಳ್ಳಿ: ನಗರದ ಓರ್ವರಿಗೆ ಅಪರಿಚಿತರು ಬೇರೆಯವರ ಹೆಸರಿನಲ್ಲಿ ಅವರಂತೆ ನಟಿಸಿ ಹಣ ವರ್ಗಾಯಿಸುವಂತೆ ಸಂದೇಶ ಕಳುಹಿಸಿ, ಡೆವಲಪರ್ಸ್ ಆ್ಯಂಡ್ ಬಿಲ್ಡರ್ಸ್ ಅವರ ಖಾತೆಯಿಂದ ಆರ್ ಟಿಜಿಎಸ್ ಮೂಲಕ 30ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ವಾಟ್ಸಅಪ್ ಸಂಖ್ಯೆಗೆ ಅವರ ಮ್ಯಾನೇಜರ್ ಹೆಸರಿನಲ್ಲಿ ಹಣ ವರ್ಗಾಯಿಸುವಂತೆ ಸಂದೇಶ ಕಳುಹಿಸಿ ಮೋಸವೆಸಗಿದ್ದಾರೆ ಎಂದು ಮಹ್ಮದಸಾದಿಕ ಎಂಬುವರು ದೂರು ಸಲ್ಲಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.