ಯಡ್ರಾಮಿ: ಕಣಮೇಶ್ವರ ಗ್ರಾಮದಲ್ಲಿ ಮಾವನನ್ನೆ ಕೊಂದ ಅಳಿಯ: ಶವಕ್ಕೆ ಉಪ್ಪು ಹಚ್ಚಿ ಮನೆಯೊಳಗಿನ ಅಟ್ಟದ ಮೇಲೆ ಇಟ್ಟಿದ್ದ ಭೂಪ
ಕಲಬುರಗಿ : ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ, ಅಳಿಯನೇ ತನ್ನ ಸೋದರ ಮಾನವನನ್ನ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಶವಕ್ಕೆ ಉಪ್ಪು ಹಚ್ಚಿ ಬೆಡ್ಶಿಟ್ನಲ್ಲಿ ಶವ ಸುಟ್ಟಿಟ್ಟು ಮನೆ ಅಟ್ಟದ ಮೇಲೆ ಇಟ್ಟಿರೋ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದಲ್ಲಿ ನಡೆದಿದೆ.. ಅಕ್ಟೋಬರ್ 11 ರಂದು ಬೆಳಗ್ಗೆ 9 ಗಂಟೆಗೆ ಪಬ್ಲಿಕ್ ಆ್ಯಪ್ಗೆ ಮಾಹಿತಿ ಲಭ್ಯವಾಗಿದೆ.. ಮಾವ ಶರಣಬಸವ ಮತ್ತು ಅಳಿಯ ಅಜಯ್ ಮಧ್ಯೆ ಹಣಕಾಸಿನ ವಿಚಾರಕ್ಕೆ ಜಗಳ ನಡೆಯುತ್ತಿತ್ತು.. ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಮಾವನ ಕತ್ತು ಹಿಸುಕಿ ಸಾಯಿಸಿದಾನೆ. ಬಳಿಕ ಶವಕ್ಕೆ ಉಪ್ಪು ಹಚ್ಚಿ ಬೆಡ್ಶಿಟ್ನಲ್ಲಿ ಶವ ಸುತ್ತಿಟ್ಟು ಮನೆಯೊಳಗಿನ ಅಟ್ಟದ ಮೇಲೆ ಇಟ್ಟಿರೋ ಪ್ರಕರಣ ಬೆಳಕಿಗೆ ಬಂದಿದೆ.. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ