ಖಾಲಿ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಚಿತ್ತಾಪುರ ಪಟ್ಣಣದ ವೆಂಕಟೇಶ್ವರ ಕಾಲೋನಿಯಲ್ಲಿ ಡಿ.30ರ ರಾತ್ರಿ 3 ಗಂಟೆ ಸುಮಾರಿಗೆ ನಡೆದಿದೆ. ಸುರೇಶ ಸರಾಫ್ ಎನ್ನುವವರ ಮನೆಯಲ್ಲಿ ಬಾಡಿಗೆಗೆ ಇದ್ದವರು ಕಳೆದ ಒಂದು ತಿಂಗಳ ಹಿಂದೇಯೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದು, ಖಾಲಿ ಮನೆಯ ಬಾಗಿಲಿನ ಕೀಲಿ ಕೈ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ ಇಲ್ಲಿ ಏನು ಸಿಗದಿದ್ದಾಗ, ರಮೇಶ ಬೋವಿ ಎಂಬುವರ ಮನೆಗೆ ಕನ್ನ ಹಾಕಿದ ಕಳ್ಳರು, 1 ತೊಲೆ ಬಂಗಾರ, 16 ತೊಲೆ ಬೆಳ್ಳಿ, 1500 ರೂ. ಕದ್ದಿದ್ದಾರೆ. ಅದರಂತೆ ಜಗನ್ನಾಥ ಗುತ್ತೇದಾರ ಎನ್ನುವರ ಮನೆ ಮುಂದುಗಡೆ ನಿಲ್ಲಿಸಿದ ಪಲ್ಸರ್ ಬೈಕ್ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೇರೆಯಾಗಿದೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್ಐ ಮಂಜುನ