ಜಮಖಂಡಿ: ಜನೇವರಿ 6.ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ, ನಗರದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು
ಜನವರಿ ೩ ರಿಂದ ಜನವರಿ ೬ ವರೆಗೆ ಯಡೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಸಾನಿಧ್ಯದಲ್ಲಿ ರಾಜಗೋಪುರಗಳ ಲೋಕಾರ್ಪಣೆ, ಮಹಾಭಿಷೇಕ,ಲಕ್ಷ ದೀಪೋತ್ಸವ, ಕೃಷ್ಣಾರತಿ ಮತ್ತು ಶ್ರೀ ಶ್ರೀಶೈಲ ಜಗದ್ಗುರುಗಳ ಧರ್ಮ ಜಾಗೃತಿ ಯಾತ್ರೆ ಜರುಗಲಿದೆ.ಹಾಗೂ ವಿವಿಧ ಧಾರ್ಮಿಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ನಗರದ ಮುತ್ತಿನಕಂತಿ ಮಠದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.ಇದೇ ಸಂಧರ್ಭದಲ್ಲಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ,ಮುತ್ತಿನಕಂತಿ ಮಠದ ಷ.ಬ್ರ.ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಸೇರಿ ಅನೇಕರು ಉಪಸ್ಥಿತರಿದ್ದರು.