ಶಹಾಬಾದ: ಪಟ್ಟಣದಲ್ಲಿ ಕಳೆದುಹೋದ 25 ಮೊಬೈಲ್ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಿದ ಎಸ್ಪಿ
ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸುಲು ಅವರು ಗುರುವಾರ ಶಹಾಬಾದ್ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ನಡೆಸಿದರು. ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲಿಸಿ ಅವರು, ಠಾಣಾ ಸಿಬ್ಬಂದಿಗೆ ಉತ್ತಮ ಕರ್ತವ್ಯ ನಿರ್ವಹಣೆಯ ಕುರಿತು ಸಲಹೆ–ಸೂಚನೆಗಳನ್ನು ನೀಡಿದರು. ಇದೆ ಸಂದರ್ಭದಲ್ಲಿ ಶಹಬಾದ ಪೊಲೀಸರು ಪತ್ತೆಹಚ್ಚಿದ 25 ಮೊಬೈಲ್ ಫೋನ್ಗಳನ್ನು ಎಸ್ಪಿ ಅವರು ವಾರಸುದಾರರಿಗೆ ಹಸ್ತಾಂತರ ಮಾಡಿದರು. ಈ ಕುರಿತು ಗುರುವಾರ 8 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ....