ಬೆಂಗಳೂರು ಪೂರ್ವ: ಕೊಲೆ ಮಾಡಿ ಜಾಲಿ ಟ್ರಿಪ್ ಮಾಡಿದ ಪಾಪಿ ಪತಿ! ಪತಿಯೇ ಪರ ದೈವ ಅಂದು ಕೊಂಡವಳಿಗೆ ಪರಮಾತ್ಮನ ಪಾದಕ್ಕೆ ಸೇರಿಸಿದ ಮಾರತ್ ಹಳ್ಳಿಯ ಮೃಗ ಗಂಡ!
ಕೃತಿಕ ರೆಡ್ಡಿ ಕೊಲೆ ಕೇಸ್ ಸಂಬಂಧ ಬಗೆದಷ್ಟು ವಿಚಾರ ಬಯಲಾಗುತ್ತಿದೆ. ಸದ್ಯ ಕೃತಿಕಾ ಪತಿ ಮಹೇಂದ್ರ ಆಕೆಯನ್ನು ಕೊಲೆ ಮಾಡಿ ಗೋವಾಗೆ ಜಾಲಿ ಟ್ರಿಪ್ ಮಾಡಲು ಹೋಗಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ. ಅಕ್ಟೋಬರ್ 19 ಸಂಜೆ 7 ಗಂಟೆಗೆ ಲಭ್ಯ ಆದ ಮಾಹಿತಿ ಪ್ರಕಾರ ಕೃತಿಕಾ ಸತ್ತಾಗ ಮಹೇಂದ್ರ ಪೋಸ್ಟ್ ಮಾರ್ಟಂ ಗೆ ಅಡ್ಡಲಾಗಿ ನಿಂತಿದ್ದ. ಶಸ್ತ್ರ ಮುಗಿಸಿ ಅಂತೆಲ್ಲಾ ಕಥೆ ಕಟ್ಟಿದ್ದ. ಗೊಳೋ ಅಂತ ಅತ್ತು ಸಿಂಪಥಿ ಕಾರ್ಡ್ ಪ್ಲೇ ಮಾಡಿದ್ದ. ಆದ್ರೆ ಹೆಂಡತಿ ಸತ್ತು ಒಂದೇ ವಾರಕ್ಕೆ ತಿಥಿ ಮುಗಿಸಿ ಗೋವಾಕ್ಕೆ ಹಾರಿದ್ನಂತೆ. ಜಾಲಿ ಟ್ರಿಪ್ ಮಾಡಿ ಫೋಟೋಗೆ ಪೋಸ್ ಕೊಟ್ಟಿದ್ದ. ಸದ್ಯ FSL ರಿಪೋರ್ಟ್ ಇಂದ ಕ್ರಿಮಿಯಾ ಕಟ್ಟಿ ಹಾಕಲಾಗಿದೆ.