ಹುನಗುಂದ ತಾಲೂಕಾ ಗ್ರಾಮ ಪಂಚಾಯುತಿ ಪಿಡಿಓ ವಿರುದ್ಧ ಹಕ್ಕು ಚ್ಯುತಿ,ಭ್ರಷ್ಟಾಚಾರದ ಆರೋಪ. ಹಿರೇಮಾಗಿ ಗ್ರಾಮ ಪಂಚಾಯಿತಿ ಮುಂದೆ ಗ್ರಾಮ ಪಂಚಾಯತಿ ಸದಸ್ಯರ ಪ್ರತಿಭಟನೆ. ಗ್ರಾಮ ಪಂಚಾಯಿತಿ ಸದಸ್ಯ ರಮೇಶ ದೊಡಮನಿ ನೇತೃತ್ವದಲ್ಲಿ ಪ್ರತಿಭಟನೆ.ಪಿ.ಡಿ.ಓ ಶಕುಂತಲಾ ಮೇಟಿ ವಿರುದ್ಧ ಆಕ್ರೋಶ. ಮೇಲಾಧಿಕಾರಿಗಳು, ಗ್ರಾಮಪಂಚಾಯಿತಿ ಸದಸ್ಯರುಗೆ ತಿಳಿಸಿದೇ ಸೇವಾ ಕೇಂದ್ರ ಉದ್ಘಾಟಿಸಿರುವ ಪಿ.ಡಿ.ಓ ಶಕುಂತಕಾ.ಜಲಜೀವನ್ ಮಿಷನ್ ಯೋಜನೆಯಡಿ ಐದು ಲಕ್ಷ ಭ್ರಷ್ಟಾಚಾರ,ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಮೂರು ಲಕ್ಷ ರೂಪಾಯಿ ಭ್ರಷ್ಟಾಚಾರದ ಆರೋಪ.ಪಿಡಿಓ ವಿರುದ್ಧ ಕೆಂಡಕಾರಿದ ಗ್ರಾಮ ಪಂಚಾಯಿತಿ ಸದಸ್ಯರು. ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕು ಚ್ಯುತಿ ಮಾಡಲಾಗಿದೆ ಎಂಬ ಆರೋಪ ಮಾಡಿದ್ದಾರೆ.