ಶಿವಮೊಗ್ಗ: ಪತಿಗೆ ಜಾತಿ ನಿಂದನೆ, ಒಂದು ವರ್ಷ 2 ತಿಂಗಳು ಜೈಲು ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್
ಅಂತರ್ಜಾತಿ ಮದುವೆಯಾಗಿ ತನ್ನ ಹೆಂಡತಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದ ಪತಿಗೆ ಒಂದು ವರ್ಷ 2 ತಿಂಗಳು ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿ ಶಿವಮೊಗ್ಗ 2 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಬುಧವಾರ ಸಂಜೆ 5 ಗಂಟೆಗೆ ತೀರ್ಪು ನೀಡಿದೆ. ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದ ಚಿದಾನಂದ ಶಿಕ್ಷೆಗೆ ಒಳಗಾದ ಆರೋಪಿ. ಮಂಜುಳ ಎಂಬುವರನ್ನ ಮದುವೆಯಾಗಿ ಮದುವೆ ನಂತರ ಜಾತಿ ನಿಂದ ನೆ ಮಾಡಿದ ಹಿನ್ನೆಲೆ ಕುಂಸಿ ಠಾಣೆಯಲ್ಲಿ 2023 ರಲ್ಲಿ ಕೇಸ್ ದಾಖಲಾಗಿತ್ತು. ಎಸ್ಟಿ ಎಸ್ಟಿ ಕಾಯ್ದೆ ಪ್ರಕಾರ ಆರೋಪಿಗೆ ಒಂದು ವರ್ಷ ಎರಡು ತಿಂಗಳು ಜೈಲು ವಿಧಿಸಲಾಗಿದೆ.