ಕಲಬುರಗಿ: ನಾನು ಆರಾಧಿಸುವ ದೇವರ ಮೂರ್ತಿಗೆ ನಾನೇ ಹಾನಿ ಮಾಡಲು ಸಾಧ್ಯಾನಾ?: ನಗರದಲ್ಲಿ ಮುತ್ತಗಾ ಮೂರ್ತಿ ವಿರೂಪ ಪ್ರಕರಣದ ಆರೋಪಿ ಶಿವರಾಜ ನಾಟೀಕರ್
ಮುತ್ತಗಾ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ವಿರೂಪ ಪ್ರಕರಣದಲ್ಲಿ ಬಂಧಿತರಾಗಿದ್ದ ಕೋಲಿ ಸಮಾಜದ ಅಧ್ಯಕ್ಷ ಶಿವರಾಜ ನಾಟಿಕರ ಅವರು ತಮ್ಮ ಮೇಲಿನ ಆರೋಪವನ್ನು ಸಂಪೂರ್ಣ ತಳ್ಳಿಹಾಕಿದ್ದಾರೆ. ನಾನು ಸಮಾಜಕ್ಕಾಗಿ ಹೋರಾಡುತ್ತಿರುವ ವ್ಯಕ್ತಿ. ನನ್ನ ಹೋರಾಟ ನನ್ನ ಬೆಳವಣಿಗೆ ಸಹಿಸಲು ಆಗದ ಕೇಲ ಪಟ್ಟಬದ್ಧ ಹಿತಾಸಕ್ತಿಗಳು ಸುಳ್ಳು ಕೇಸ್ ದಾಖಲಿಸುವ ಹುನ್ನಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ನನ್ನ ದೇಹದ ಮೇಲೆಯೇ ಅಂಬಿಗರ ಚೌಡಯ್ಯನವರ ಹೆಸರು ಅಚ್ಚು ಹಾಕಿಸಿಕೊಂಡಿದ್ದೇನೆ. ನನ್ನ ಎಲ್ಲ ವಾಹನಗಳ ಮೇಲೂ ಅವರ ಹೆಸರು ಇದೆ. ಪ್ರತಿ ಸಭೆ ಸಮಾರಂಭಗಳಲ್ಲಿ ಚೌಡಯ್ಯನವರ ಭಾವಚಿತ್ರವನ್ನು ಗೌರವದಿಂದ ಕೊಡುವ ನಾನು ಅವರ ಮೂರ್ತಿ ಭಗ್ನಗೊಳಿಸುವ ಕೆಲಸ ಮಾಡುತ್ತೇ