ಚಿತ್ರದುರ್ಗ:ಆಗಸದ ಮೇಲೆ ಹಾರುವ ವಿಮಾನವನ್ನು ಕಂಡು ಬಡತನದಲ್ಲಿ ಬೆಳೆದ ಬಡ ಮಕ್ಕಳು ಆನಂದಿಸುತ್ತಿದ್ದರು, ವಿಮಾನ ಪ್ರವಾಸವೆಂಬುದು ವಿದ್ಯಾರ್ಥಿಗಳಿಗೆ ಗಗನ ಕುಸುಮವೇ ಆಗಿತ್ತು ಆದರೆ ಸರ್ಕಾರಿ ಶಾಲೆಯ ಮಕ್ಕಳು ಹಕ್ಕಿಯಂತೆ ಹಾರುವ ಕನಸನ್ನು ನನಸು ಮಾಡಲು ಹೊರಟ ಗ್ರಾಮಸ್ಥರು ತಾವೇ ಹಣ ಕ್ರೂಢೀಕರಿಸಿ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರವಾಸಕ್ಕೆ ಕೈಜೋಡಿಸಿ ಸರ್ಕಾರಿ ಶಾಲೆಯ ಮಕ್ಕಳ ಆಸೆಯನ್ನು ಈಡೇರಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋರ್ಲೆತ್ತು ಗ್ರಾಮದ ಸರ್ಕಾರಿ ಶಾಲೆಯ 20 ವಿದ್ಯಾರ್ಥಿಗಳಿಗೆ ದೆಹಲಿ ವಿಮಾನ ಪ್ರವಾಸವನ್ನು ಪ್ರಾಯೋಜಿಸಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ವಿಮಾನ ಪ್ರವಾಸ ಮಾಡಿದ್ದಾರೆ