ಕಲಬುರಗಿ: ನ.10 ರಿಂದ ಎರಡು ದಿನ ಕೆಕೆಆರ್ ಡಿಬಿ ಅಧ್ಯಕ್ಷರ ಕಲಬುರಗಿ ಪ್ರವಾಸ
ಕೆಕೆಆರ್ ಡಿಬಿ ಅಧ್ಯಕ್ಷ ಅಜಯಸಿಂಗ್ ಅವರು, ನ. ೧೦ ರಿಂದ ಎರಡು ದಿನ ಕಲಬುರಗಿ ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಇಂದು ರಾತ್ರಿ ರೈಲಿನ ಮೂಲಕ ಕಲಬುರಗಿಗೆ ನ.10 ರಂದು ಆಗಮಿಸಲಿರೋ ಅವರು,ಅಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ಅಂದು ಅವರು ಕಲಬುರ್ಗಿಯಲ್ಲಿ ವಾಸ್ತವ್ಯ ಮಾಡಲಿರೋ ಅವರು,ನ. ೧೧ ರಂದು ಕೆಕೆಆರ್ ಡಿಬಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ಅವರ ಪ್ರವಾಸದ ಬಗ್ಗೆ ತಿಳಿಸಲಾಗುತ್ತದೆ ಎಂದು ಅವರ ಆಪ್ತ ಕಾರ್ಯದರ್ಶಿ ನ. ೯ ರಂದು ಮಾಹಿತಿ ನೀಡಿದ್ದಾರೆ.