ಕುಂದಗೋಳ ಕ್ಷೇತ್ರದಲ್ಲಿ ಸನ್ 2025 - 26ನೇ ಸಾಲಿನ PRAMC ಅಡಿಯಲ್ಲಿ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಆಯ್ದ ಪ್ರದೇಶಗಳಲ್ಲಿ - ತಿಮ್ಮಾಪುರ ಮಾಗಡಿ ರಸ್ತೆಯಲ್ಲಿ ( ಕಿಮೀ 10 .20 ರಿಂದ 14.90 ಕಿಮೀ ಇಂಗಳಗಿ ತರ್ಲಘಟ್ಟ) ವರೆಗಿನ ರಸ್ತೆಯನ್ನು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಇಂದು ಇಂಗಳಗಿಯಲ್ಲಿ ಶಾಸಕರಾದ ಎಂ.ಆರ್.ಪಾಟೀಲ್ ಅವರು. ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತರ್ಲಘಟ್ಟ ಇಂಗಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮದ ಗುರುಹಿರಿಯರು ಮತ್ತು ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.