ಹುಮ್ನಾಬಾದ್: ಮಾಣಿನಗರದ ಶ್ರೀ ಮಾಣಿಕಪ್ರಭು ದೇವಸ್ಥಾನದಲ್ಲಿ ಪ್ರಭು ಮಹಾರಾಜರ ಪುಣ್ಯತಿಥಿ ಅಂಗವಾಗಿ ಆರಾಧನೆ ಹಾಗೂ ಪ್ರಸಾದ ವಿತರಣೆ
ಕಲ್ಯಾಣ ಕರ್ನಾಟಕ ಇತಿಹಾಸ ಪ್ರಸಿದ್ಧ ಮಾಣಿಕ್ ನಗರದ ಮಾಣಿಕಪ್ರಭು ದೇವಸ್ಥಾನದಲ್ಲಿ ಮಾಣಿಕಪ್ರಭುಗಳ ಪುಣ್ಯತಿಥಿಯ ಅಂಗವಾಗಿ ಸೋಮವಾರ ರಾತ್ರಿ 11:51 ಕ್ಕೆ ಪುರೋಹಿತರಿಗೆ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ. ಜ್ಞಾನರಾಜ ಮಹಾರಾಜರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿ, ಪ್ರಸಾದ ವಿತರಿಸಲಾಯಿತು. ಈ ವೇಳೆ ಅನಂತರಾಜ ಪ್ರಭು, ಚೇತನರಾಜ ಪ್ರಭು ಸೇರಿದಂತೆ ಸಂಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಸೇವಾಸಕ್ತ ಭಕ್ತವೃಂದ ಪ್ರಮುಖರು ಹಾಜರಿದ್ದರು.