ಹಿರೇಕೆರೂರು ತಾಲೂಕು ಇಂಗಳಗೊಂಡಿ ಗ್ರಾಮದ ಸಿದ್ದಪ್ಪ ತಾರಗಿ ಎಂಬುವವರ ಮಗ 36 ವರ್ಷದ ಕಿರಣ್ ಕುಮಾರ್ ಎಂಬುವರು ಶಿವಮೊಗ್ಗ ನಗರದ ರಾಗಿಗುಡ್ಡದ ತಮ್ಮ ಬಾಡಿಗೆ ಮನೆಯಿಂದ ಮೂರು ತಿಂಗಳಿನಿಂದ ಕಾಣೆಯಾಗಿದ್ದಾನೆ. ಈತನ ಚಹರೆ 5.6 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕೆನ್ನೆಯ ಮೇಲೆ ಕಪ್ಪು ಮಚ್ಚೆ ಇರುತ್ತದೆ. ಈ ವ್ಯಕ್ತಿಯ ಕುರಿತು ಸುಳಿವು ದೊರತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಸೋಮವಾರ ಮಧ್ಯಾಹ್ನ 2 ಗಂಟೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ