ಶಿವಮೊಗ್ಗ: ವೆಂಕಟಾಪುರದ ತಿರುಮಲ ದೇವಸ್ಥಾನದಲ್ಲಿ ವಾರ್ಷಿಕೋತ್ಸವ, ತಿರುಕಲ್ಯಾಣೋತ್ಸವ ಸಂಪನ್ನ
ಶಿವಮೊಗ್ಗ ತಾಲೂಕಿನ ಬಿ. ಬೀರನಹಳ್ಳಿಯ ವೆಂಕಟಾಪುರದಲ್ಲಿರುವ ತಿರುಮಲ ದೇವರ ದೇವಸ್ಥಾನ ಸಮಿತಿಯಿಂದ ತಿರುಮಲ ರಂಗನಾಥ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತಿರುಕಲ್ಯಾಣೋತ್ಸವ ಮತ್ತು ಮಹಾಸುದರ್ಶನ ಹೋಮವನ್ನು ದೇವಸ್ಥಾನ ಆವರಣದಲ್ಲಿ ನಡೆಸಲಾಗಿದೆ. ಗುರುಪ್ರಾರ್ಥನೆ, ಅನುಜ್ಞೆ , ಮಹಾಸಂಕಲ್ಪ , ವಿಶ್ವಕ್ಷೇನ ಮಹಾಗಣಪತಿ ಆರಾಧನೆ , ಪುಣ್ಯಾಹವಾಚನ ಪಂಚಗವ್ಯ ಆರಾಧನೆ ಹಾಗೂ ವಿಶೇಷವಾಗಿ ತಿರುಮಲ ರಂಗನಾಥಸ್ವಾಮಿಯ ಕಲ್ಯಾಣೋತ್ಸವ ದೀಪಾರಾಧನೆ ಮಂತ್ರಪುಷ್ಪ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸುಪ್ರಭಾತ ಸೇವೆ, ವೇದಪಾರಾಯಣ,ಕಲಶಾರಾಧನೆ, ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ ಪೂಜೆ ನಡೆಯಿತು.