ಮೈಸೂರು: ಸೆಪ್ಟೆಂಬರ 17 ರಂದು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Mysuru, Mysuru | Sep 15, 2025 ಸೆಪ್ಟೆಂಬರ 17 ರಂದು ಬೆಳಗ್ಗೆ 10 ಗಂಟೆಯಿoದ ಸಂಜೆ 6 ಘಂಟೆಯವರೆಗೆ 66/11 ಕೆ.ವಿ ಮಂಡಕಳ್ಳಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿರುವುದರಿಂದ ಮಂಡಕಳ್ಳಿ, ಗೆಜ್ಜಗಳ್ಳಿ ಐ.ಪಿ ಪ್ರದೇಶ, ಎಸ್. ಉತ್ತನಹಳ್ಳಿ ಸುತ್ತ-ಮುತ್ತಲಿನ ಪ್ರದೇಶಗಳು, ಜೆ.ಪಿ ನಗರ, ಶ್ರೀನಗರ, ರೇಷ್ಮೆನಗರ, ಮಹಾಲಕ್ಷ್ಮಿಬಡಾವಣೆ, ಟೀಚರ್ಸ್ ಬಡಾವಣೆ, ಆರ್.ಕೆ ಬಡಾವಣೆ, ಭಾವನಾ ಬಡಾವಣೆ, ವಿನಾಯಕ ಬಡಾವಣೆ, ಕೊಪ್ಪಲೂರು, ಮಹಾಲಕ್ಷ್ಮಿ ದೃಷ್ಟಿ ಬಡಾವಣೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ವ್ಯತ್ಯಯವಾಗಲಿದೆ.