ಕಂಠಪೂರ್ತಿ ಕುಡಿದು ಕಾರು ಚಾಲನೆ ಮಾಡಿದ ಪರಿಣಾಮ ತೀರ್ಥಹಳ್ಳಿ ಪಟ್ಟಣದ ತುಂಗಾ ಕಾಲೇಜಿನ ತಿರುವಿನಲ್ಲಿ ಕಾರು ಪಲ್ಟಿಯಾದ ಘಟನೆ ಗುರುವಾರ ಸಂಜೆ 5 ಗಂಟೆಗೆ ನಡೆದಿದೆ. ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪ ನಿವಾಸಿ ರಾಘವೇಂದ್ರ ಎಂಬುವರು ಯಡೂರು ಗ್ರಾಮದಿಂದ ಆಲ್ಟೋ ಕಾರಿನಲ್ಲಿ ಕಂಠಪೂರ್ತಿ ಕುಡಿದು ತುಂಗಾ ಕಾಲೇಜಿನ ತಿರುವಿನಲ್ಲಿ ಕಾರನ್ನು ಪಲ್ಟಿ ಹೊಡೆಸಿದ್ದಾರೆ. ಕಾರಿನಲ್ಲಿ ಮೂರು ಶ್ವಾನಗಳು ಇದ್ದು ಅದೃಷ್ಟವಶಾತ್ ಶ್ವಾನಗಳು ಪಾರಾಗಿವೆ. ಇನ್ನು ಸ್ಥಳೀಯರು ಕಾರನ್ನ ಮೇಲೆತ್ತಿದ್ದಾರೆ.