ಶಿವಮೊಗ್ಗ: ಡಿಜೆ ಬಳಸಿದ್ದಕ್ಕೆ ಡಿಜೆ ಮಾಲೀಕರು ಮತ್ತು ಆಯೋಜಕರ ವಿರುದ್ಧ ಕೇಸ್, ಸುಮೋಟೋ ಪ್ರಕರಣ ದಾಖಲಸಿದ ಶಿವಮೊಗ್ಗದ ಕೋಟೆ ಪೊಲೀಸರು
ಗಣಪತಿ ವಿಸರ್ಜನಾ ಮೆರವಣಿಗೆ, ಡಿಜೆ ಮಾಲೀಕರು ಮತ್ತು ಆಯೋಜಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ ಭಾನುವಾರ ಸಂಜೆ ನಡೆದ ವೀರಕೇಸರಿ ಸೇವಾಸಮಿತಿಯ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಸಿದ್ದಕ್ಕೆ ಡಿಜೆ ಮಾಲೀಕರು ಮತ್ತು ಆಯೋಜಕರು ಸೇರಿ ಒಟ್ಟು 12 ಜನರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಎಫ್ಐಆರ್ ದಾಖಲಾಗಿದೆ. ಆರ್ಗನೈಸರ್ ಪವನ್ ಸೇರಿ 11 ಜನ ಮತ್ತು ಬೆಳಗಾವಿಯ ಡಿಜೆ ಮಾಲೀಕ ಕುಮಾರ್ ವೆಂಕಟೇಶ್ ಒಂಟಗೋಡಿ, ವಿಜಯ ಪವಾರ್ ಎಂಬುವರ ವಿರುದ್ಧ ಡಿಜೆ ಬಳಸಿದ್ದಕ್ಕೆ ಸುಮೋಟೊ ಪ್ರಕರಣ ದಾಖಲಾಗಿದೆ.