ಹೊಸನಗರ: ಸಾಲಗೇರಿ ಅಕ್ರಮ ಕಲ್ಲು ಮರಳು ದಂಧೆ: ಅಧಿಕಾರಿಗಳ ಜಾಣ ಕುರುಡು
ಹೊಸನಗರ ತಾಲೂಕಿನ ಜಯನಗರ ಕಸಬ ಹೋಬಳಿಯ ಸಾಲಗೇರಿ ಗ್ರಾಮದ ಸರ್ವೆ ನಂ.20 ರಲ್ಲಿ ಹೆಗ್ಗಿಲ್ಲದೆ ಕಲ್ಲು ಮರಳು ಗಣಿಗಾರಿಕೆ ನಡೆಯುತ್ತಿದೆ ಸರ್ಕಾರಿ ಭೂಮಿ ಗೋಮಾಳ ಅಥವಾ ಮೀಸಲು ಅರಣ್ಯ ಜಾಗದ ನೂರಾರು ಎಕ್ಕರೆ ಜಮೀನುಗಳಲ್ಲಿ ಅಂದಾಜು 15 ಕಲ್ಲುಕ್ವಾರಿಗಳು ಚಾಲ್ತಿಯಲ್ಲಿದ್ದು, ಇವುಗಳಲ್ಲಿ ಕೆಲವು ಎರಡರಿಂದ ಮೂರು ಕಲ್ಲು ಕಾರ್ಯಗಳಿಗೆ ಮಾತ್ರ ಪರವಾನಿಗೆ ಇದೆ ಇನ್ನುಳಿದ ಯಾವುದೇ ಭಯವಿಲ್ಲದೆ ದಿನನಿತ್ಯ ಅರವತ್ತು ಲಾರಿ ಮತ್ತು ಟಿಪ್ಪರ್ ಗಳಲ್ಲಿ ಗಣಿಗಾರಿಕೆ ನಡೆಯುವ ಸ್ಥಳದಿಂದ ಮುಖ್ಯ ರಸ್ತೆಗೆ ಹೊರ ಬರುತ್ತಿವೆ ಇದರಿಂದ ಸ್ಥಳೀಯ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗುತ್ತಿದೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡು ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತಾದ ಮಾಹಿತಿಯು ಬುಧವಾರ ಲಭ್ಯವಾಗಿದೆ.