ಹುಬ್ಬಳ್ಳಿ ನಗರ: ನಗರದಲ್ಲಿ ಒಂದೇ ಎಲೆಕ್ಟ್ರಿಕಲ್ ಬೈಕ್ ನಲ್ಲಿ ಏಳು ಜನರ ಸಂಚಾರ
ಹುಬ್ಬಳ್ಳಿಯಲ್ಲಿ ಒಂದೇ ಎಲೆಕ್ಟ್ರಿಕಲ್ ಬೈಕ್ ನಲ್ಲಿ ಹೇಳು ಜನರು ಹತ್ತಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿ ಕೇಶ್ವಾಪೂರ ಹತ್ತಿರ ಎಲೆಕ್ಟ್ರಿಕಲ್ ಬೈಕ್ ನಲ್ಲಿ ಏಳು ಜನರು ಹೋಗುತ್ತಿರುವ ವಿಡಿಯೋವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ರಾಫಿಕ್ ಪೊಲೀಸರು ತ್ರಿಬಲ್ ರೈಡಿಂಗ್ ಮಾಡಿದರೆ ದಂಡ ಹಾಕುತ್ತಾರೆ. ಆದರೆ ಇವರು ಒಂದೇ ಬೈಕಿನಲ್ಲಿ ಹೇಳು ಜನರು ಸಂಚಾರ ಮಾಡಿದ್ದು ಇವರಿಗೆ ಯಾವ ದಂಡ ಹಾಕಬೇಕೆಂದು ಕಮೆಂಟ್ಸಗಳು ವ್ಯಕ್ತವಾಗಿವೆ.