ಕಲಬುರಗಿ: ಮೋರಾರ್ಜಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಹಣ ವಸೂಲಿ: ನಗರದಲ್ಲಿ ಎಐಬಿಎಸ್ಪಿ ನಾಯಕ ಸುನೀಲ ಇಂಗನಕಲ್ ಆರೋಪ
ಚಿತ್ತಾಪೂರ ತಾಲೂಕಿನ ಗುಂಡಗುರ್ತಿ ಮೋರಾರ್ಜಿ ದೇಸಾಯಿ ವಸತಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಸುನೀಲ ಇಂಗನಕಲ್ಲ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.. ಪ್ರಾಂಶುಪಾಲಕಿ ಶಿವಮ್ಮ ಬಡಿಗೇರ ಅವರು ಬಡ ವಿದ್ಯಾರ್ಥಿಗಳಿಂದ ಹಣ ಪಡೆದು ಪ್ರವೇಶ ನೀಡಿದ್ದಾರಂತೆ. ಈ ಕುರಿತಾಗಿ ಬುಧವಾರ 4 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಪ್ರಥಮ ಪಿಯುಸಿ 19 ಮತ್ತು ದ್ವಿತೀಯ ಪಿಯುಸಿ 12 ವಿದ್ಯಾರ್ಥಿಗಳಿಂದ ತಲಾ 5 ರಿಂದ 40 ಸಾವಿರವರೆಗೆ, ಒಟ್ಟಾರೆ 13 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕೂಡಲೇ ಪ್ರಾಂಶುಪಾಲರನ್ನು ಅಮಾನತ್ತು ಮಾಡಿ ತನುಖೆ ನಡೆಸಬೇಕೆಂದು ಸುನೀಲ ಇಂಗನಕಲ್ಲ ಆಗ್ರಹಿಸಿದ್ದಾರೆ