ಚಿತ್ರದುರ್ಗದ ನಗರದ ಕೋಟೆನಾಡು ಬುದ್ದ ವಿಹಾರ ಧ್ಯಾನ ಕೇಂದ್ರದಲ್ಲಿ ವಿಶ್ವ ಬೌದ್ಧಧ್ವಜ ದಿನಾಚರಣೆ ಪ್ರಯುಕ್ತ ಬೌದ್ಧ ಧ್ವಜಾರೋಹಣ ನೆರವೇರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಬುದ್ಧ ಧರ್ಮಕ್ಕೆ ಪ್ರತ್ಯೇಕ ಧ್ವಜ ಬೇಕಿಲ್ಲ ಎನ್ನುವುದು ಅರ್ಥಹೀನವಾದುದು. ವಿಶ್ವ ಬೌದ್ಧ ಪಂಚಶೀಲ ಧ್ವಜವು ಧಮ್ಮದ ಸಂಕೇತ, ಮಾನವೀಯತೆಗೆ ಮಾರ್ಗದರ್ಶಿ ಯಾಗಿದೆ ಎಂದರುಜಗತ್ತಿನ ಪ್ರತಿಯೊಂದು ದೇಶಕ್ಕೂ ಒಂದು ರಾಷ್ಟ್ರಧ್ವಜವಿದೆ ಎಂದರು