ಶಿವಮೊಗ್ಗ: ಬಸವಾನಿ ಗ್ರಾಮದಲ್ಲಿ ಸಹಕಾರ ಭವನ ಉದ್ಘಾಟಿಸಿದ ಸಚಿವ ಮಧುಬಂಗಾರಪ್ಪ
ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ನೂತನವಾಗಿ ನಿರ್ಮಿಸಿರುವ ಸಹಕಾರ ಭವನವನ್ನು ಉಸ್ತುವಾರಿ ಸಚಿವ ಮಧುಬಂಗಾರಪ್ಪ ಭಾನುವಾರ ಸಂಜೆ 5:45 ಕ್ಕೆ ಉದ್ಘಾಟಿಸಿದರು. ಈ ವೇಳೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ್ರು, ಸಹ್ಯಾದ್ರಿ ಸಮುದಾಯ ಸಂಸ್ಥೆ ಅಧ್ಯಕ್ಷ ಬಸವಾನಿ ವಿಜಯದೇವ್ ಸೇರಿದಂತೆ ಸಹಕಾರ ಸಂಘದ ಪ್ರಮುಖರು ಹಾಜರಿದ್ದರು.